ಮಜ್ಲಿಸು ಖಿದ್ಮತಿಲ್ ಇಸ್ಲಾಂ ಇದರ 2ನೇ ವಾರ್ಷಿಕ ಜಲಾಲಿಯ್ಯಃ ರಾತೀಬ್ ಮಜ್ಲಿಸ್ ಮತ್ತು ಮಹಾಸಭೆ ಇಚ್ಚಿಲಂಗೋಡ್ ಪಚ್ಚಂಬಳದ ಅಬ್ದುಲ್ ರಶೀದ್ ಸಖಾಫಿ ಇಚ್ಚಿಲಂಗೋಡ್ ರವರ ಶಫಾಅತ್ ಪ್ಯಾಲೇಸಿನಲ್ಲಿ ನಡೆಯಿತು.
ಶೈಖುನಾ ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಬೆಳ್ಮ ಉಸ್ತಾದರ ಪೂರ್ವ ವಿದ್ಯಾರ್ಥಿಗಳ ಸಂಘಟನೆಯಾದ ಮಜ್ಲಿಸು ಖಿದ್ಮತಿಲ್ ಇಸ್ಲಾಂ ಇದರ ವತಿಯಿಂದ ನಡೆದ ಜಲಾಲಿಯ್ಯಃ ರಾತೀಬ್ ಮಜ್ಲಿಸ್ ಮತ್ತು ಸಭೆಗೆ ಉಸ್ತಾದರು ನೇತ್ರತ್ವ ನೀಡಿದರು.
ಮಜ್ಲಿಸಿನ ಬಳಿಕ ನಡೆದ ವಿಶೇಷ ಸಭೆಯಲ್ಲಿ ಮುಂದಿನ ಕಾರ್ಯ ಯೋಜನೆಗಳನ್ನು ರೂಪಿಸಲಾಯಿತು. ಶೈಖುನಾ ಉಸ್ತಾದರಿಗೆ ಮಜ್ಲಿಸ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ವರದಿ ಹಾಗು ಲೆಕ್ಕಪತ್ರ ಮಂಡಿಸಿದರು. ಪ್ರಸ್ತುತ ಸಮಿತಿಯನ್ನು ಸರ್ವ ಸಮ್ಮತದೊಂದಿಗೆ ಮುಂದುವರಿಯಲು ತೀರ್ಮಾನಿಸಲಾಯಿತು ಮತ್ತು ಫಾರೂಖ್ ಕುಕ್ಕುಡಿ ಯವರನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹೊಸದಾಗಿ ಸೇರ್ಪಡೆಗೊಳಿಸಲಾಯಿತು.
ಮಜ್ಲಿಸು ಖಿದ್ಮತಿಲ್ ಇಸ್ಲಾಂ ಈ ತನಕ ನಡೆಸಿದ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದ ಉಸ್ತಾದರು ಹಿತೋಪದೇಶಗಳನ್ನು ನೀಡಿ ಮಜ್ಲಿಸಿನ ಸದಸ್ಯರು, ಕುಟುಂಬಸ್ಥರಿಗೆ ದುಆ ನಡೆಸಿದರು.
ಸಭೆಯಲ್ಲಿ ಮಜ್ಲಿಸಿನ ಅಧ್ಯಕ್ಷರಾದ ಹಾಫಿಲ್ ಹನೀಫ್ ಸಅದಿ ಮಠ, ಉಪಾಧ್ಯಕ್ಷರುಗಳಾದ ಅಶ್ರಫ್ ಸಖಾಫಿ ಮುರ, ಅಬ್ದುಲ್ ಮಜೀದ್ ಬಾ ಹಸನಿ, ಸಂಚಾಲಕರಾದ ಅಬ್ದುಲ್ ರಹ್ಮಾನ್ ಲತೀಫಿ ಸಿ.ಎಚ್, ಕಾರ್ಯಕಾರಿ ಸಮಿತಿ ಸದಸ್ಯರಾದ ಅಬ್ದುಲ್ ರಶೀದ್ ಸಖಾಫಿ ಇಚ್ಚಿಲಂಗೋಡ್, ಅಬ್ದುಲ್ ರಶೀದ್ ಜಲಾಲಿ ಕಕ್ಕಿಂಜೆ ಮತ್ತು ನೂತನ ಕಾರ್ಯಕಾರಿ ಸಮಿತಿ ಸದಸ್ಯರಾದ ಫಾರೂಖ್ ಕುಕ್ಕುಡಿ ಉಪಸ್ಥಿತರಿದ್ದರು.
Comments
Post a Comment