ಪವಿತ್ರ ಉಮ್ರಾ ಯಾತ್ರೆ ಹೊರಡುತ್ತಿರುವ ಮಜ್ಲಿಸು ಖಿದ್ಮತಿಲ್ ಇಸ್ಲಾಂ ಇದರ ಕೋಶಾಧಿಕಾರಿಯಾದ ಅಬ್ದುಲ್ ರಶೀದ್ ಅತ್ತಾರಿಯವರಿಗೆ ಬೀಳ್ಕೊಡುಗೆ
ಶೈಖುನಾ ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಬೆಳ್ಮ ಉಸ್ತಾದರ ಪೂರ್ವ ವಿದ್ಯಾರ್ಥಿಗಳ ಸಂಘಟನೆಯಾದ ಮಜ್ಲಿಸು ಖಿದ್ಮತಿಲ್ ಇಸ್ಲಾಂ ಇದರ ವತಿಯಿಂದ ಪವಿತ್ರ ಉಮ್ರಾ ಯಾತ್ರೆ ಹೊರಡುತ್ತಿರುವ ಮಜ್ಲಿಸು ಖಿದ್ಮತಿಲ್ ಇಸ್ಲಾಂ ಇದರ ಕೋಶಾಧಿಕಾರಿಯಾದ ಅಬ್ದುಲ್ ರಶೀದ್ ಅತ್ತಾರಿಯವರಿಗೆ ಶಾಲು ಹೊದಿಸಿ ಸನ್ಮಾನಿಸಿ ಬೀಳ್ಕೊಡಲಾಯಿತು. ಅಬ್ದುಲ್ ರಶೀದ್ ಅತ್ತಾರಿ ಮತ್ತು ಅವರ ಪತ್ನಿ ಮಕ್ಕಳು ನಾಳೆ ಬೆಳಿಗ್ಗೆ ಪವಿತ್ರ ಉಮ್ರಾ ಯಾತ್ರೆ ಕೈಗೊಳ್ಳಲಿದ್ದಾರೆ. ಅಲ್ಲಾಹನು ಅವರ ಪವಿತ್ರ ಉಮ್ರಾ ಯಾತ್ರೆಯನ್ನು ಸ್ವೀಕರಿಸಲಿ. ಯಾತ್ರೆಯ ಎಲ್ಲಾ ಆಯಾಸ, ಪ್ರಯಾಸಗಳನ್ನು ನಿವಾರಿಸಿ ಸುಖ ಸಂತೋಷ ನೀಡಲಿ. ಉಮ್ರಾದ ಎಲ್ಲಾ ಕರ್ಮಗಳನ್ನು ನಿರ್ವಹಿಸಲು, ಮುತ್ತು ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಪವಿತ್ರ ರೌಳಾ ಶರೀಫನ್ನು ಸಂದರ್ಶಿಸಲು ಅಲ್ಲಾಹನು ಅವರಿಗೆ ಆರೋಗ್ಯ ಮತ್ತು ತೌಫೀಖನ್ನು ನೀಡಲಿ. ಆಮೀನ್. ಈ ಸಂದರ್ಭದಲ್ಲಿ ಮಜ್ಲಿಸಿನ ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ, ಸದಸ್ಯರಾದ ಅಬ್ದುಲ್ ಅಝೀಝ್ ಸಖಾಫಿ ಇನೋಳಿ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.