Skip to main content

Posts

Showing posts from April, 2024

ಶೈಖುನಾ ಉಸ್ತಾದರ ಉಮ್ರಾ ಯಾತ್ರೆ.ಬೀಳ್ಕೊಡುಗೆ.

ತನ್ನ ಬದುಕನ್ನು ದರ್ಸ್ ರಂಗಕ್ಕೆ ಮೀಸಲಿಟ್ಟು ನಮಗೆ ದಾರಿದೀಪವಾಗಿ, 19-09-2023 ಮಂಗಳವಾರ ಉಮ್ರಾ ಯಾತ್ರೆ ಹೊರಟ ನಮ್ಮ ಪ್ರೀತಿಯ ಗುರು ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಬೆಳ್ಮ ಉಸ್ತಾದರ ನಿವಾಸದಲ್ಲಿ ಉಸ್ತಾದರ ಶಿಷ್ಟಂದಿರ ಸಂಘಟನೆಯಾದ ಮಜ್ಜಿಸು ಖಿದ್ಮತಿಲ್ ಇಸ್ಲಾಂ ಇದರ ವತಿಯಿಂದ ಬೀಳ್ಕೊಡುಗೆ ಸಮಾರಂಭ ನಡೆಯಿತು. ಉಸ್ತಾದರನ್ನು ಮಜ್ಜಿಸು ಖಿದ್ಮತಿಲ್ ಇಸ್ಲಾಂ ವತಿಯಿಂದ ಶಾಲು ಹೊದಿಸಿ, ಸ್ಮರಣಿಕೆ ಮತ್ತು ಕಿರು ಕಾಣಿಕೆ ನೀಡಿ ಗೌರವ ಪೂರ್ವಕ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ, ಸಂಚಾಲಕ ಸಿ.ಎಚ್ ಅಬ್ದುಲ್ ರಹ್ಮಾನ್ ಲತೀಫಿ ಮತ್ತು  ಅಬ್ದುಲ್ ಅಝೀಝ್ ಸಖಾಫಿ ಉಪಸ್ಥಿತರಿದ್ದರು.

ವಿವಾಹ ಫಂಡ್ ಹಸ್ತಾಂತರ

ಮಜ್ಜಿಸು ಖದ್ಮತಿಲ್ ಇಸ್ಲಾಂ ವತಿಯಿಂದ ಸೌಫಲ್ (ನವಾಝ್) ಕೊಳಕೆಯ ತಂಗಿಯ ಮದುವೆ ಖರ್ಚಿಗೆ ಸಹಾಯಾರ್ಥವಾಗಿ ಸಂಗ್ರಹಿಸಲಾದ 36,613 ರೂಪಾಯಿಗಳನ್ನು ನವೆಂಬರ್ 07 - 2023 ರಂದು ಗೂಗಲ್ ಪೇ ಮೂಲಕ ನೌಫಲ್ ನ ಅಕೌಂಟಿಗೆ ಉಸ್ತಾದರ ಅನುಮತಿಯೊಂದಿಗೆ ವರ್ಗಾಯಿಸಲಾಯಿತು.

ತೌಸೀಫ್ ಸಅದಿ ಯವರ ಹೊಸ ಮನೆ ಗ್ರಹ ಪ್ರವೇಶ ಶುಭಾರಂಭ ಕಾರ್ಯಕ್ರಮ

ತೌಸೀಫ್ ಸಅದಿ ಯವರ ಹೊಸ ಮನೆ ಗ್ರಹ ಪ್ರವೇಶ ಶುಭಾರಂಭ ಕಾರ್ಯಕ್ರಮದ ಸಂತೋಷದಲ್ಲಿ ಭಾಗಿಯಾಗಿ ಬದ್ರಿಯತ್ ಸ್ಮರಣಿಕೆ ನೀಡಲಾಯಿತು. ಈ ಸಂದರ್ಭದಲ್ಲಿ ಮಜ್ಲಿಸು ಖಿದ್ಮತಿಲ್ ಇಸ್ಲಾಂ ಇದರ ಉಪಾಧ್ಯಕ್ಷರಾದ ಅಶ್ರಫ್ ಸಖಾಫಿ ಮುರ, ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ, ಎಸ್ಸೆಸ್ಸೆಫ್ ದ.ಕ ಜಿಲ್ಲಾ ಮಾಜಿ ಅಧ್ಯಕ್ಷರಾದ ಇಬ್ರಾಹಿಂ ಸಖಾಫಿ ಸೆರ್ಕಳ, ಎಸ್ಸೆಸ್ಸೆಫ್ ಕಕ್ಕೆಪದವು ಶಾಖಾಧ್ಯಕ್ಷರಾದ ಇರ್ಫಾನ್ ಸಅದಿ ಹಾಗು ಹನೀಫ್ ಸಖಾಫಿ ನಾಟೆಕಲ್ ಮತ್ತು ಫಹದ್ ಹಸನ್ ಉಳ್ಳಾಲ ಉಪಸ್ಥಿತರಿದ್ದರು.