ಮಜ್ಲಿಸು ಖಿದ್ಮತಿಲ್ ಇಸ್ಲಾಂ ಇದರ ವತಿಯಿಂದ ಪವಿತ್ರ ರಂಝಾನ್ ತಿಂಗಳಲ್ಲಿ ಮರ್ಹೂಂ ಹಾಫಿಲ್ ಹನೀಫ್ ಸಅದಿ ಉಸ್ತಾದರ ವಿಧವೆಯಾದ ಪತ್ನಿ ಹಾಗು ಅವರ ಯತೀಂ ಮಕ್ಕಳಿಗಾಗಿ ಸಂಗ್ರಹಿಸಿದ 50,000 ರೂಪಾಯಿಗಳನ್ನು ಹಸ್ತಾಂತರಿಸಲಾಯಿತು. ಶೈಖುನಾ ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಉಸ್ತಾದರ ಪೂರ್ವ ವಿದ್ಯಾರ್ಥಿಗಳ ಸಂಘಟನೆಯಾದ ಮಜ್ಲಿಸು ಖಿದ್ಮತಿಲ್ ಇಸ್ಲಾಂ ಹಲವು ಸಾಂತ್ವನ ಚಟುವಟಿಕೆಗಳು ನಡೆಸಿಕೊಂಡು ಬರುತ್ತಿದ್ದು, ಬಡ ಕುಟುಂಬದ ವಿವಾಹಕ್ಕೆ, ರೋಗಿಯ ಚಿಕಿತ್ಸೆಗೆ ಸಹಾಯವನ್ನು ನೀಡಿದೆ. ವಿಧವೆ ಹಾಗು ಯತೀಂ ಮಕ್ಕಳಿಗಾಗಿ ರಂಝಾನಿನಲ್ಲಿ ಶೈಖುನಾ ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಉಸ್ತಾದರ ನಿರ್ದೇಶಾನುಸಾರ ಹಣ ಸಂಗ್ರಹಿಸಲಾಗಿತ್ತು. ಅಬೂಬಕರ್ ಇನೋಳಿ ಪ್ರಥಮವಾಗಿ ಹಣ ನೀಡಿ ಫಂಡ್ ಸಂಗ್ರಹಕ್ಕೆ ಚಾಲನೆ ನೀಡಿದರು. ಮಜ್ಲಿಸ್ ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಫಂಡ್ ಸಂಗ್ರಹದ ಉಸ್ತುವಾರಿ ವಹಿಸಿದ್ದರು. ಅಶ್ರಫ್ ಸಖಾಫಿ ಮುರ, ನೌಫಲ್ ಕೊಳಕೆ, ಅಬ್ದುಲ್ ರಹ್ಮಾನ್ ಲತೀಫಿ ಬೆಳ್ಮ ಸಾಥ್ ನೀಡಿದರು. ಶೈಖುನಾ ಉಸ್ತಾದರು ಹಿತೋಪದೇಶ ಮತ್ತು ದುಆ ನೀಡುತ್ತಿದ್ದರು. ಮಜ್ಲಿಸು ಖಿದ್ಮತಿಲ್ ಇಸ್ಲಾಂ ಸಂಘಟನೆಯ ಹೆಚ್ಚಿನ ಸದಸ್ಯರು ಫಂಡ್ ಸಂಗ್ರಹದಲ್ಲಿ ಕೈ ಜೋಡಿಸಿದರು.
ಅಸ್ಸಲಾಮು ಅಲೈಕುಂ. ನಮ್ಮ ಗೌರವಾನ್ವಿತ ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಬೆಳ್ಮ ಉಸ್ತಾದರ ಶಿಷ್ಯಂದಿರ ಸಂಘಟನೆಯಾದ ಮಜ್ಲಿಸು ಖಿದ್ಮತಿಲ್ ಇಸ್ಲಾಂ ಎಂಬ ಸಂಘಟನೆಯ ಬ್ಲಾಗ್ ಆಗಿದ್ದು, ಗೌರವಾನ್ವಿತ ಉಸ್ತಾದರ ಮತ್ತು ಶಿಷ್ಯಂದಿರ ಸಂಘಟನೆಯ ಅಧೀನದಲ್ಲಿ ನಡೆಯುವ ಕಾರ್ಯ ಚಟುವಟಿಕೆಗಳು ಈ ಬ್ಲಾಗಿನಲ್ಲಿ ಲಭಿಸಲಿದೆ. . ಉಸ್ತಾದರ ನಿರ್ದೇಶನದಲ್ಲಿ ಬ್ಲಾಗ್ ಮುಂದುವರಿಯಲಿದೆ. ಇಂಶಾ ಅಲ್ಲಾಹ್.