ಶೈಖುನಾ ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಬೆಳ್ಮ ಉಸ್ತಾದರ ಶಿಷ್ಯಂದಿರ ಸಂಘಟನೆ ಮಜ್ಲಿಸು ಖಿದ್ಮತಿಲ್ ಇಸ್ಲಾಂ ಕರ್ನಾಟಕ ಇದರ ವತಿಯಿಂದ ಇತ್ತೀಚೆಗೆ ಅಪಘಾತವಾಗಿ ಹೈಲಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತೌಸೀಫ್ ಸಅದಿ ಹರೇಕಳ ಇವರ ಚಿಕಿತ್ಸಾ ವೆಚ್ಚಕ್ಕಾಗಿ 53,000 ರೂಪಾಯಿಗಳು ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಹಸ್ತಾಂತರಿಸಲಾಯಿತು. ತೌಸೀಫ್ ಸಅದಿ ಹರೇಕಳ ಶೈಖುನಾ ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಬೆಳ್ಮ ಉಸ್ತಾದರ ಶಿಷ್ಯನೂ, ಮಜ್ಲಿಸು ಖಿದ್ಮತಿಲ್ ಇಸ್ಲಾಂ ಕರ್ನಾಟಕ ಇದರ ಕಾರ್ಯದರ್ಶಿಯಾಗಿಯೂ ಕಾರ್ಯಾಚರಿಸುತ್ತಿದ್ದಾರೆ. ತೌಸೀಫ್ ಸಅದಿ ಹರೇಕಳ 2021 ಜುಲೈ 22 ರಂದು ಅಪಘಾತವಾಗಿ ಸುಮಾರು ಒಂದು ತಿಂಗಳಿಂದ ಮಂಗಳೂರಿನ ಹೈಲಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೈಖುನಾ ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಬೆಳ್ಮ ಉಸ್ತಾದರ ಶಿಷ್ಯಂದಿರ ಸಂಘಟನೆ ಮಜ್ಲಿಸು ಖಿದ್ಮತಿಲ್ ಇಸ್ಲಾಂ ಕರ್ನಾಟಕ ಸಂಗ್ರಹಿಸಿದ 53,000 ರೂಪಾಯಿಗಳನ್ನು ಇಂದು (2021 ಆಗಸ್ಟ್ 24) ಹಸ್ತಾಂತರಿಸಲಾಯಿತು. ಅವರ ಚಿಕಿತ್ಸಾ ಫಂಡಿಗಾಗಿ ಸಹಾಯ, ಸಹಕಾರ, ಸ್ಪಂದನೆ ನೀಡಿದ ಎಲ್ಲರಿಗೂ ಅಲ್ಲಾಹನು ಇಹಪರದಲ್ಲಿ ತಕ್ಕ ಪ್ರತಿಫಲ ನೀಡಲಿ. ತೌಸೀಫ್ ಸಅದಿ ಹರೇಕಳ ರವರಿಗೆ ಅಲ್ಲಾಹನು ಬೇಗನೇ ಚೇತರಿಕೆ ನೀಡಲಿ. ಎಲ್ಲಾ ಆಪತ್ತು, ವಿಪತ್ತು ಗಳಿಂದ ಅಲ್ಲಾಹನು ನಮ್ಮನ್ನು, ನಮ್ಮ ಕುಟುಂಬವನ್ನು, ಸ್ನೇಹಿತರನ್ನು ಕಾಪಾಡಲಿ. ಆಮೀನ್. ✍️ ನವಾಝ್ ಸಖಾಫಿ ಉಳ್ಳಾಲ. ಪ್ರ: ಕಾರ...
ಅಸ್ಸಲಾಮು ಅಲೈಕುಂ. ನಮ್ಮ ಗೌರವಾನ್ವಿತ ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಬೆಳ್ಮ ಉಸ್ತಾದರ ಶಿಷ್ಯಂದಿರ ಸಂಘಟನೆಯಾದ ಮಜ್ಲಿಸು ಖಿದ್ಮತಿಲ್ ಇಸ್ಲಾಂ ಎಂಬ ಸಂಘಟನೆಯ ಬ್ಲಾಗ್ ಆಗಿದ್ದು, ಗೌರವಾನ್ವಿತ ಉಸ್ತಾದರ ಮತ್ತು ಶಿಷ್ಯಂದಿರ ಸಂಘಟನೆಯ ಅಧೀನದಲ್ಲಿ ನಡೆಯುವ ಕಾರ್ಯ ಚಟುವಟಿಕೆಗಳು ಈ ಬ್ಲಾಗಿನಲ್ಲಿ ಲಭಿಸಲಿದೆ. . ಉಸ್ತಾದರ ನಿರ್ದೇಶನದಲ್ಲಿ ಬ್ಲಾಗ್ ಮುಂದುವರಿಯಲಿದೆ. ಇಂಶಾ ಅಲ್ಲಾಹ್.