ಗೌರವಾನ್ವಿತ ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಬೆಳ್ಮ ಉಸ್ತಾದರ ಪ್ರೀತಿಯ ಶಿಷ್ಯನೂ, ನಮ್ಮೆಲ್ಲರ ಒಲವಿನ ಮಿತ್ರನೂ ಆದ ಅಬ್ದುಲ್ ಮಜೀದ್ ಬಾಹಸನಿ ಯವರು ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಚರ್ಯೆಯ ಹಾದಿಯಲ್ಲಿ ಸುರಸುಂದರ ದಾಂಪತ್ಯ ಬದುಕಿಗೆ ಪಾದಾರ್ಪಣೆಗೈದು ಅತಿ ಮಧುರ ಅನಿರ್ವಚನೀಯ ಹೊಂಗನಸಾದ ವೈವಾಹಿಕ ಬಾಳ್ವೆಗೆ ಆದರ್ಶ ಬದ್ಧವಾಗಿ ಪ್ರವೇಶಿಸುತ್ತಿರುವ ಈ ಶುಭ ಮುಹೂರ್ತದಲ್ಲಿ ನಮ್ಮ ಹ್ರದಯಾಂತರಾಳದಿಂದ ಬಾರಕಲ್ಲಾಹು ಲಕುಮಾ ವಬಾರಕ ಅಲೈಕುಮಾ...
ಪ್ರಕ್ರತಿಯ ಪ್ರಶಾಂತದಲ್ಲಿ ಬೇರೆ ಬೇರೆಯಾಗಿರುವ ಸ್ತ್ರೀ ಪುರುಷನನ್ನು ನಿಯಮಬದ್ಧ ಪ್ರೇಮಬದ್ಧವಾಗಿ ಒಂದುಗೂಡಿಸುವ ಸುಂದರ ರೂಪವೇ ವಿವಾಹಬಂಧ. ಕೋಟ್ಯಾನುಕೋಟಿ ನಿರೀಕ್ಷೆಗಳೊಂದಿಗೆ ಸುಮಧುರ ವೈವಾಹಿಕ ಜೀವನಕ್ಕೆ ಪ್ರವೇಶಿಸುತ್ತಿರುವ ತಮಗಿದೋ ಹ್ರದಯಾಂತರಾಳದ ಶುಭಾಶಂಶೆಗಳು.
ಅಧ್ಯಕ್ಷರು ಮತ್ತು ಸರ್ವ ಸದಸ್ಯರು.
ಮಜ್ಲಿಸು ಖಿದ್ಮತಿಲ್ ಇಸ್ಲಾಂ
ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಉಸ್ತಾದರ ಶಿಷ್ಯಂದಿರ ಸಂಘಟನೆ.
17/12/2020


Comments
Post a Comment