Skip to main content

ಮಜ್ಲಿಸು ಖಿದ್ಮತಿಲ್ ಇಸ್ಲಾಂ ಇದರ 3 ನೇ ವಾರ್ಷಿಕ ಜಲಾಲಿಯ್ಯಃ ರಾತೀಬ್ ಮಜ್ಲಿಸ್ ಮತ್ತು ಮಹಾಸಭೆ


ಮಜ್ಲಿಸು ಖಿದ್ಮತಿಲ್ ಇಸ್ಲಾಂ ಇದರ 3 ನೇ ವಾರ್ಷಿಕ ಜಲಾಲಿಯ್ಯಃ ರಾತೀಬ್ ಮಜ್ಲಿಸ್ ಮತ್ತು ಮಹಾಸಭೆ ಹಾಫಿಲ್ ಹನೀಫ್ ಸಅದಿ ಮಠ ಇವರ ರಹ್ಮಾನಿಯ್ಯಃ ಪ್ಯಾಲೇಸಿನಲ್ಲಿ ನಡೆಯಿತು.

ಶೈಖುನಾ ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಬೆಳ್ಮ ಉಸ್ತಾದರ ಪೂರ್ವ ವಿದ್ಯಾರ್ಥಿಗಳ ಸಂಘಟನೆಯಾದ ಮಜ್ಲಿಸು ಖಿದ್ಮತಿಲ್ ಇಸ್ಲಾಂ ಇದರ ವತಿಯಿಂದ ನಡೆದ ಜಲಾಲಿಯ್ಯಃ ರಾತೀಬ್ ಮಜ್ಲಿಸ್ ಮತ್ತು ಸಭೆಗೆ ಉಸ್ತಾದರು ನೇತ್ರತ್ವ ನೀಡಿದರು. ಅಶ್ರಫ್ ಸಖಾಫಿ ಮುರ ಅನುಸ್ಮರಣಾ ಭಾಷಣ ಮಾಡಿದರು. 

ಮಜ್ಲಿಸಿನ ಬಳಿಕ ನಡೆದ ವಿಶೇಷ ಸಭೆಯಲ್ಲಿ ಮುಂದಿನ ಕಾರ್ಯ ಯೋಜನೆಗಳನ್ನು ರೂಪಿಸಲಾಯಿತು. ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ವರದಿ ಹಾಗು ಲೆಕ್ಕಪತ್ರ ಮಂಡಿಸಿದರು.

ಮರ್ಹೂಂ ಹಾಫಿಲ್ ಹನೀಫ್ ಸಅದಿ ಮಠ ಇವರ ಮರಣದಿಂದ ತೆರವಾದ ಸ್ಥಾನಕ್ಕೆ ನೂತನ ಅಧ್ಯಕ್ಷರಾಗಿ ಅಶ್ರಫ್ ಸಖಾಫಿ ಮುರ ಇವರನ್ನು ಆರಿಸಲಾಯಿತು. ನೂತನ ಅಧ್ಯಕ್ಷರಾಗಿ ಅಶ್ರಫ್ ಸಖಾಫಿ ಮುರ ಆಯ್ಕೆಗೊಂಡ ನಿಮಿತ್ತ ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ನೂತನ ಉಪಾಧ್ಯಕ್ಷರಾಗಿ ಅಬ್ದುರ್ರಶೀದ್ ಹಿಮಮಿ ಸಖಾಫಿ ಪಚ್ಚಂಬಳ ಆಯ್ಕೆಗೊಂಡರು.

 ಉಳಿದ ಪದಾಧಿಕಾರಿಗಳು, ಕಾರ್ಯಕಾರಿಣಿ ಸಮಿತಿ ಸದಸ್ಯರನ್ನು ಈ ಹಿಂದೆ ಇದ್ದ ರೀತಿಯಲ್ಲಿ  ಮುಂದುವರಿಯಲು ಸರ್ವ ಸಮ್ಮತದೊಂದಿಗೆ ತೀರ್ಮಾನಿಸಲಾಯಿತು.

ಪ್ರಸ್ತುತ ಸಭೆಯಲ್ಲಿ ಅಬ್ದುರ್ರಹ್ಮಾನ್ ಲತೀಫಿ ಬೆಳ್ಮ, ನೌಫಲ್ ಕೊಳಕೆ, ಇಲ್ಯಾಸ್ ಆಲಡ್ಕ, ಸಿದ್ದೀಖ್ ಇನೋಳಿ, ರಫೀಖ್ ಪಾವೂರು, ಅನೀಸ್ ಮಂಜನಾಡಿ, ಅಶ್ರಫ್ ಜಿ ಮುರ, ಅಬ್ದುಲ್ ಹಮೀದ್ ಕಾಶಿಪಟ್ನ ಮತ್ತು ಮುಹ್ಸಿನ್ ಉಳ್ಳಾಲ ಉಪಸ್ಥಿತರಿದ್ದರು.


 ಕೈಗೊಂಡ ತೀರ್ಮಾನಗಳು.

1- ಮಜ್ಜಿಸು ಖಿದ್ಮತಿಲ್ ಇಸ್ಲಾಂ ಇದರ ಚಾಲ್ತಿಯಲ್ಲಿರುವ ಸಮಿತಿ ಮುಂದುವರಿಕೆ.
2- ಮಜ್ಲಿಸು ಖಿದ್ಮತಿಲ್ ಇಸ್ಲಾಂ ಇದರ ಸ್ಥಾಪಕಾಧ್ಯಕ್ಷರಾದ ಮರ್ಹೂಂ ಹಾಫಿಲ್ ಹನೀಫ್ ಸಅದಿ ಮಠ ಇವರ ಮರಣದಿಂದ ತೆರವಾದ ಸ್ಥಾನಕ್ಕೆ ನೂತನ ಅಧ್ಯಕ್ಷರಾಗಿ ಅಶ್ರಫ್ ಸಖಾಫಿ ಮುರ ಹಾಗು ಉಪಾಧ್ಯಕ್ಷರಾಗಿದ್ದ  ಅಶ್ರಫ್ ಸಖಾಫಿ ಮುರ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ನಿಮಿತ್ತ ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ಅಬ್ದುರ್ರಶೀದ್ ಹಿಮಮಿ ಸಖಾಫಿ ಪಚ್ಚಂಬಳ ಆಯ್ಕೆ.
3- ಒಂದು ತಿಂಗಳು ದ್ಸಿಕ್ರ್ ಮಜ್ಲಿಸ್ ಮತ್ತೊಂದು ತಿಂಗಳು ಸ್ವಲಾತ್ ಮಜ್ಲಿಸ್ ನಡೆಸುವುದು. ಇದರ ಉಸ್ತುವಾರಿಗಾಗಿ ಅಬ್ದುರ್ರಹ್ಮಾನ್ ಲತ್ವೀಫಿ ಬೆಳ್ಮ ಮತ್ತು ನೌಫಲ್ ಕೊಳಕೆ ಇವರನ್ನು ಆರಿಸಲಾಯಿತು. 
4- ವರ್ಷಕ್ಕೊಮ್ಮೆ ಮಜ್ಲಿಸ್ ಖಿದ್ಮತಿಲ್ ಇಸ್ಲಾಂ ನ ಪ್ರತಿಯೊಬ್ಬ ಸದಸ್ಯರು ಖತ್ಮುಲ್ ಕುರಾನ್ ಮಾಡಿ ಮತ್ತು 70,000 ದ್ಸಿಕ್ರ್ ಗಳನ್ನು ಹೇಳುವುದು.
5- ಮಜ್ಲಿಸು ಖಿದ್ಮತಿಲ್ ಇಸ್ಲಾಂ ನ ಯಾರಾದರೂ ಸದಸ್ಯರು ಅಥವಾ ಕುಟುಂಬದಲ್ಲಿ ತೀವ್ರತರವಾದ ರೋಗ ಅಥವಾ ಮರಣ ಉಂಟಾದಲ್ಲಿ ಸಂದರ್ಶಿಸಿ ಸಾಂತ್ವನಗೈಯ್ಯುವುದು.


Comments

Popular posts from this blog

ಮಜ್ಲಿಸು ಖಿದ್ಮತಿಲ್ ಇಸ್ಲಾಂ ಇದರ 4 ನೇ ವಾರ್ಷಿಕ ಸಭೆ ಮತ್ತು ಜಲಾಲಿಯ್ಯಃ ರಾತೀಬ್ ಮಜ್ಲಿಸ್

ಮಜ್ಲಿಸು ಖಿದ್ಮತಿಲ್ ಇಸ್ಲಾಂ ಇದರ 4 ನೇ ವಾರ್ಷಿಕ ಸಭೆ ಮತ್ತು ಜಲಾಲಿಯ್ಯಃ ರಾತೀಬ್ ಮಜ್ಲಿಸ್ ಹರೇಕಳ ಫರೀದ್ ನಗರದ ರಫೀಖ್  ಪ್ಯಾಲೇಸಿನಲ್ಲಿ ನಡೆಯಿತು. ಶೈಖುನಾ ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಬೆಳ್ಮ ಉಸ್ತಾದರ ಪೂರ್ವ ವಿದ್ಯಾರ್ಥಿಗಳ ಸಂಘಟನೆಯಾದ ಮಜ್ಲಿಸು ಖಿದ್ಮತಿಲ್ ಇಸ್ಲಾಂ ಇದರ ವತಿಯಿಂದ ನಡೆದ ಜಲಾಲಿಯ್ಯಃ ರಾತೀಬ್ ಮಜ್ಲಿಸ್ ಮತ್ತು ಸಭೆಗೆ ಉಸ್ತಾದರು ನೇತ್ರತ್ವ ನೀಡಿದರು. ಮಜ್ಲಿಸಿನ ಬಳಿಕ ನಡೆದ ವಾರ್ಷಿಕ ಸಭೆಯಲ್ಲಿ ಮುಂದಿನ ಕಾರ್ಯ ಯೋಜನೆಗಳನ್ನು ರೂಪಿಸಲಾಯಿತು. ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ಸ್ವಾಗತಿಸಿ, ವರದಿ ಹಾಗು ಲೆಕ್ಕಪತ್ರ ಮಂಡಿಸಿದರು. ಶೈಖುನಾ ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಬೆಳ್ಮ ಉಸ್ತಾದರು ಮಾತನಾಡಿ, ಫೆಲೆಸ್ತೀನಿನ ಗಾಝಾದಲ್ಲಿ ಮಕ್ಕಳು ಮಹಿಳೆಯರು ಸಹಿತ ಅಲ್ಲಿನ ನಾಗರಿಕರನ್ನು ಅತ್ಯಂತ ಕ್ರೂರವಾಗಿ ಇಸ್ರೇಲ್ ಕೊಲ್ಲುತ್ತಿರುವುದು ಅತ್ಯಂತ ಖಂಡನೀಯವಾಗಿದ್ದು, ಅದೇ ಸಂದರ್ಭದಲ್ಲಿ ಯಮನಿನಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಕೇರಳದ ನಿಮಿಷಾ ಪ್ರಿಯ ಎಂಬ ಸಹೋದರಿಯ ಗಲ್ಲು ಶಿಕ್ಷೆಯನ್ನು ರದ್ದು ಪಡಿಸಲು ಮತ್ತು ಬಿಡುಗಡೆಗೊಳಿಸಲು ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ಮಾಡುತ್ತಿರುವ ಮಾನವೀಯ ಕಾರುಣ್ಯದ ಚಟುವಟಿಕೆಯನ್ನು ಪ್ರಶಂಶಿಸಿ ಇದು ನಮಗೆ ಮಾದರಿಯಾಗಬೇಕು ಎಂದರು. ಸಭೆಯಲ್ಲಿ ಶೈಖುನಾ ಉಸ್ತಾದರಿಗೆ ಮತ್ತು ಉಸ್ತಾದರ ಶಿಷ್ಯರಲ್ಲಿ ವೈದ್ಯರಾಗಿ ಸ...

ಶೈಖುನಾ ಉಸ್ತಾದರ ಉಮ್ರಾ ಯಾತ್ರೆ.ಬೀಳ್ಕೊಡುಗೆ.

ತನ್ನ ಬದುಕನ್ನು ದರ್ಸ್ ರಂಗಕ್ಕೆ ಮೀಸಲಿಟ್ಟು ನಮಗೆ ದಾರಿದೀಪವಾಗಿ, 19-09-2023 ಮಂಗಳವಾರ ಉಮ್ರಾ ಯಾತ್ರೆ ಹೊರಟ ನಮ್ಮ ಪ್ರೀತಿಯ ಗುರು ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಬೆಳ್ಮ ಉಸ್ತಾದರ ನಿವಾಸದಲ್ಲಿ ಉಸ್ತಾದರ ಶಿಷ್ಟಂದಿರ ಸಂಘಟನೆಯಾದ ಮಜ್ಜಿಸು ಖಿದ್ಮತಿಲ್ ಇಸ್ಲಾಂ ಇದರ ವತಿಯಿಂದ ಬೀಳ್ಕೊಡುಗೆ ಸಮಾರಂಭ ನಡೆಯಿತು. ಉಸ್ತಾದರನ್ನು ಮಜ್ಜಿಸು ಖಿದ್ಮತಿಲ್ ಇಸ್ಲಾಂ ವತಿಯಿಂದ ಶಾಲು ಹೊದಿಸಿ, ಸ್ಮರಣಿಕೆ ಮತ್ತು ಕಿರು ಕಾಣಿಕೆ ನೀಡಿ ಗೌರವ ಪೂರ್ವಕ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ, ಸಂಚಾಲಕ ಸಿ.ಎಚ್ ಅಬ್ದುಲ್ ರಹ್ಮಾನ್ ಲತೀಫಿ ಮತ್ತು  ಅಬ್ದುಲ್ ಅಝೀಝ್ ಸಖಾಫಿ ಉಪಸ್ಥಿತರಿದ್ದರು.