ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಬೆಳ್ಮ ಉಸ್ತಾದರ ಶಿಷ್ಯಂದಿರ ಸಂಘಟನೆ ಮಜ್ಲಿಸು ಖಿದ್ಮತಿಲ್ ಇಸ್ಲಾಂ ಕರ್ನಾಟಕ ಇದರ ವತಿಯಿಂದ ಇತ್ತೀಚೆಗೆ ಅಪಘಾತವಾಗಿ ಕಳೆದ ಮೂರು ವಾರಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತೌಸೀಫ್ ಸಅದಿ ಹರೇಕಳ ಇವರ ಶೀಘ್ರ ಚೇತರಿಕೆಗಾಗಿ ನಾರಿಯತ್ ಸ್ವಲಾತ್ ಮಜ್ಲಿಸ್ ನಡೆಯಿತು.
ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಬೆಳ್ಮ ಉಸ್ತಾದರು ಮಜ್ಲಿಸಿಗೆ ನೇತ್ಪತ್ವ ನೀಡಿ, ಮುಹರ್ರಂ ತಿಂಗಳ ಮತ್ತು ಆಶೂರಾ, ತಾಸೂಆಅ್ ಉಪವಾಸದ ಮಹತ್ವದ ಕುರಿತು ತರಗತಿ ನಡೆಸಿ, ದುಆ ನಡೆಸಿದರು.
ಅರೆಬಿಕ್ ತಿಂಗಳ ಪ್ರಥಮ ಶುಕ್ರವಾರ ಮಾಸಿಕವಾಗಿ ದ್ಸಿಕ್ರ್, ಸ್ವಲಾತ್ ಮಜ್ಲಿಸ್ ನಡೆಸುವುದೆಂದು ಪ್ರಸ್ತುತ ಕಾರ್ಯಕ್ರಮದಲ್ಲಿ ತೀರ್ಮಾನಿಸಲಾಯಿತು. ಮಜ್ಲಿಸ್ ನಿರ್ವಹಣೆಯ ಉಸ್ತುವಾರಿಯಾಗಿ ನೌಫಲ್ ಕೊಳಕೆ ಹಾಗು ನವಾಝ್ ಸಖಾಫಿ ಉಳ್ಳಾಲ ರವರನ್ನು ಆರಿಸಲಾಯಿತು.
ಉಸ್ತಾದರ ಶಿಷ್ಯಂದಿರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Comments
Post a Comment