ಮಜ್ಲಿಸು ಖಿದ್ಮತಿಲ್ ಇಸ್ಲಾಂ ಕರ್ನಾಟಕ ಇದರ ವಾರ್ಷಿಕ ಮಜ್ಲಿಸ್ ಮತ್ತು ಸಭೆ ಉಪ್ಪಿನಂಗಡಿಯ ಮುರದ ಮಿದ್ಲಾಜ್ ಪ್ಯಾಲೇಸಿನಲ್ಲಿ ನಡೆಯಿತು.
ಶೃಖುನಾ ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಬೆಳ್ಮ ಉಸ್ತಾದರ ಪೂರ್ವ ವಿದ್ಯಾರ್ಥಿಗಳ ಸಂಘಟನೆಯಾದ ಮಜ್ಲಿಸು ಖಿದ್ಮತಿಲ್ ಇಸ್ಲಾಂ ಇದರ ವತಿಯಿಂದ ನಡೆದ ಜಲಾಲಿಯ್ಯಃ ರಾತೀಬ್ ಮಜ್ಲಿಸ್ ಮತ್ತು ಸಭೆಗೆ ಉಸ್ತಾದರು ನೇತ್ರತ್ವ ನೀಡಿದರು.
ಮಜ್ಲಿಸಿನ ಬಳಿಕ ನಡೆದ ವಿಶೇಷ ಸಭೆಯಲ್ಲಿ ಮುಂದಿನ ಕಾರ್ಯ ಯೋಜನೆಗಳನ್ನು ರೂಪಿಸಲಾಯಿತು.
ಸಭೆಯಲ್ಲಿ ಕೈಗೊಂಡ ತೀರ್ಮಾನಗಳು.
1- ಎಲ್ಲಾ ಹಿಜರಿ ತಿಂಗಳ ಮೂರನೇ ಶುಕ್ರವಾರ ಮಜ್ಲಿಸ್ ನಡೆಸುವುದು. ಒಂದು ತಿಂಗಳು ತಹ್ಲೀಲ್ ಮಜ್ಲಿಸ್, ನಂತರದ ತಿಂಗಳು ನಾರಿಯತು ಸ್ವಲಾತ್ ಮಜ್ಲಿಸ್ ನಡೆಸುವುದು.
2- ವರ್ಷದ ಪ್ರಥಮ ತಿಂಗಳಾದ ಮುಹರ್ರಮಿನಲ್ಲಿ ವಾರ್ಷಿಕ ನಡೆಸುವುದು.
3- ಮಜ್ಲಿಸು ಖಿದ್ಮತಿಲ್ ಇಸ್ಲಾಂ ಸಂಘಟನೆಯ ಸದಸ್ಯರ ಹತ್ತಿರದ ಕುಟುಂಬಸ್ಥರಲ್ಲಿ ಯಾರಾದರೂ ಮರಣಹೊಂದಿದರೆ ಕುರಾನ್ ಖತ್ಮ್ ಹದ್ಯಾ ಮಾಡುವುದು.
4- ಮಜ್ಲಿಸಿನ ಪ್ರಗತಿಗೋಸ್ಕರ ಕನಿಷ್ಠ 100 ರೂಪಾಯಿಗಳು ಸದಸ್ಯತನ ಶುಲ್ಕವಾಗಿ ನೀಡುವುದು.
5- ಎಲ್ಲಾ ತಿಂಗಳ ಮೂರನೇ ಶುಕ್ರವಾರ ಮಜ್ಲಿಸ್ ನಡೆಸುವುದು.
ಮಜ್ಲಿಸು ಖಿದ್ಮತಿಲ್ ಇಸ್ಲಾಂ ಈ ತನಕ ನಡೆಸಿದ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದ ಉಸ್ತಾದರು ಮಜ್ಲಿಸಿನ ಸದಸ್ಯರು, ಕುಟುಂಬಸ್ಥರಿಗೆ ದುಆ ನಡೆಸಿದರು.
Comments
Post a Comment